CO-INCIDENCE!?


“ನಾನು ಈಗ ಹೇಳೋದನ್ನು ನಿನಗೆ ನಂಬೋಕೆ ಕಷ್ಟ ಆಗಬಹುದು ಆದ್ರೆ ನನ್ನ ಅರ್ಥ ಮಾಡ್ಕೋ..Because Everything was coincidence. ಪ್ರತಿಯೊಂದು ಸಣ್ಣ ವಿಷಯವೂ ಕೂಡ. ಯಾವುದನ್ನು ನನ್ನ ಇಚ್ಛೆಯಿಂದ ಮಾಡಿದ್ದಲ್ಲ. ಅವಳನ್ನು ಮೊದಲ ಸಲ ನೋಡಿದ್ದು, ಅವಳ ಬಗ್ಗೆ ಗೊತ್ತಾಗಿದ್ದು, ಮತ್ತೆ ಎಲ್ಲಾವೂ. ಇಷ್ಟೆಲ್ಲ ಆದಮೇಲೆ ಅವಳನ್ನು ಪರಿಚಯ ಮಾಡ್ಕೋಬೇಕು ಅಂದ್ಕೊಂಡೆ, ಆದ್ರೆ ಯಾಕೋ ಆಗ್ಲಿಲ್ಲ. ಇದ್ದಕ್ಕಿದಂತೆ ಒಬ್ಳು ಹುಡುಗಿ ಹತ್ರ ಹೋಗಿ ಏನಂತ ಮಾತಾಡ್ಲಿ?..ಅಲ್ಲದೇ ಅವಳ ಫ್ರೆಂಡ್ಸ್ ಯಾರೊಬ್ಬರು ನನಗೆ ಪರಿಚಯವಿರಲಿಲ್ಲ…
ಹೀಗಿದ್ದಾಗಲೇ ಒಂದಿನ ಅವಳು ನಿನ್ನೊಡನ್ನೆ ಮಾತಾಡ್ತಿರೋದನ್ನು ನೋಡ್ದೆ..ಅವತ್ತೇ ಬಸ್’ನಲ್ಲಿ ನೀನು ನನ್ನ ಪಕ್ಕದಲ್ಲಿ ಕುಳಿತ್ತಿದ್ದು. ಬಹುಶಃ ಅದು ಕೂಡ COINCIDENCE ಆಗಿತ್ತು ಅನ್ಸುತ್ತೆ.”

“ಸರಿ..ಆದ್ರೆ ನೀನ್ ಯಾರ್ ಬಗ್ಗೆ ಹೇಳ್ತಿದೀಯಾ??”

“ಅದು..ನಿನ್ ಬೆಸ್ಟ್ ಫ್ರೆಂಡ್ ಅನನ್ಯ”

“ಏನು?”

“ಹೌದು. ಅವತ್ತು ಅವಳ ಪರಿಚಯ ಮಾಡ್ಕೊಬೇಕು ಅನ್ನೋ ಒಂದೇ ಕಾರಣಕ್ಕೆ ನಾ ನಿನ್ನ ಪರಿಚಯ ಮಾಡ್ಕೊಂಡಿದ್ದು..ಆದ್ರೆ ಈಗ ಎಲ್ಲ ಬದಲಾಗಿದೆ ಅಷ್ಟೆ. ನೀ ಯಾವಾಗ್ಲೂ ಅವಳ ಜೊತೆ ಇರೋದ್ದನ್ನ ಗಮನಿಸಿ ನಾನು ನಿನ್ನ ಜೊತೆಗೆ ಬರುವೆ. ಆಗ ಅವಳು ನನ್ನ ಕಣ್ಮುಂದೆ ಇರೋದೆ ನನಗೊಂದು ಖುಷಿ.. ನಾವೆಲ್ಲ ಒಂದೇ ಕ್ಲಾಸ್ ಆಗಿದ್ರೆ ಚೆನ್ನಾಗಿರೋದು..ಅವಳು ನನಗೆ Facebook friend ಆಗಿದ್ರೂ ನಾನು ಚಾಟಿಂಗ್ ಶುರು ಮಾಡಿರಲಿಲ್ಲ..ಹೀಗಿರೊವಾಗ ರೋಹನ್ ಅವಳ ಹಿಂದೆ ಬಿದ್ದ..ಅಲ್ಲದೇ ಪರಿಚಯ ಮಾಡ್ಕೊಂಡು ಜೊತೆಗೆ ಇರುವ.. ಅವನು ಎಲ್ಲ ಹುಡಗಿರ ಹತ್ರ ಹೀಗೆ ಮಾಡ್ತಿದಕ್ಕೆ ನಂಗೆ ಅವನ ಕಂಡ್ರೆ ಆಗ್ತಿರಲಿಲ್ಲ..ಅವನಿಗೂ ನಾನಂದ್ರೆ ಅಷ್ಟಕ್ಕಷ್ಟೆ..ಪಾಪಿ ನನ್ನ ಬಗ್ಗೆ ಅವಳ್ಹತ್ರ ಏನ್ ಹೇಳಿದ್ನೋ, ಅವಳು ನನ್ನ Unfriend ಮಾಡ್ಬಿಟ್ಲು..ಅದಾದ್ಮೇಲೆ ಅವಳ ಮೇಲಿನ ಮೋಹ ಬಿಟ್ಟೆ.. ಆದ್ರೆ ನಮ್ಮಿಬ್ಬರ ಸಂಬಂಧ ಗಟ್ಟಿ ಆಯ್ತು.. ಆಗ ನೀನು ಪ್ರಪೋಸ್ ಮಾಡ್ದೆ..ಆಮೇಲೆ ನಮ್ಮ ಗೆಳೆತನ ಪ್ರೀತಿ ಆಯ್ತು..ಒಂದ್ ವೇಳೆ ಅವಳೊಂದಿಗೂ ಇದ್ದಿದ್ರೂ ಇಷ್ಟು ಸಂತೋಷವಾಗಿರೋದಕ್ಕೆ ಸಾಧ್ಯವಿರಲಿಲ್ಲ ಅನ್ಸುತ್ತೆ.. I love you ಅಪೂರ್ವ”

” I love you too ರಾಜ್ ” ಎನ್ನತ್ತಾ ಅವನ ಅಪ್ಪಿಕೊಂಡು ತನ್ನ ಮನಸ್ಸಲ್ಲೇ ನೆನೆಯುತ್ತಾಳೆ ” ನನಗೆಲ್ಲಾ ಗೊತ್ತಿತ್ತು ಕಣೋ.. ಪ್ರತಿಯೊಂದು ಸಣ್ಣ ವಿಷಯವೂ ಕೂಡ.. ನೀನು ಸದಾ ಅವಳ ನೋಡೊದನ್ನ ಗಮನಿಸಿದೆ.. ನಿನ್ನ ಪರಿಚಯ ಮಾಡ್ಕೊಬೇಕು ಅನ್ನೋ ಒಂದ್ ಕಾರಣಕ್ಕೆ ನಾ ಅವಳನ್ನ ಪರಿಚಯ ಮಾಡ್ಕೊಂಡಿದ್ದು.. ಮುಖ್ಯವಾಗಿ ನಮ್ಮ ಭೇಟಿ COINCIDENCE ಅಲ್ಲ.. ಅದೇ ನನ್ನ ಮೊದಲ ಪ್ಲಾನ್.. ನೀ ಬರ್ತೀಯಾ ಅಂತಾನೇ ಅವಳ ಜೊತೆಗೆ ಇರುವೆ..ನಾಮಕಾವಸ್ಥೆಗಷ್ಟೆ ಅವಳನ್ನ ಬೆಸ್ಟ್ ಫ್ರೆಂಡ್ ಮಾಡ್ಕೊಂಡಿದ್ದು.. ನಾವೆಲ್ಲ ಒಂದೇ ಕ್ಲಾಸ್ ಆಗ್ದಿರೋದೆ ಒಳ್ಳೆದಾಯ್ತು.. ಆ ಸಮಯದಲ್ಲೇ ನೀ ಅವಳ Facebook friend ಆದೆ.. ನಿನ್ನ ಕಳ್ಕೋತೀನಿ ಅನ್ನೋ ಭಯ ಶುರುವಾಯ್ತು.. ಅದಕ್ಕೆ ನನ್ನ ಬೆಸ್ಟ್ ಫ್ರೆಂಡ್ ರೋಹನ್’ನ ಅವಳ ಹಿಂದೆ ಬಿಟ್ಟೆ.. ಕೊನೆಯದಾಗಿ ನಿನ್ನ Unfriend ಮಾಡಿದ್ದು ಕೂಡ ನಾನೇ.. ಇಷ್ಟೆಲ್ಲಾ ಆದ್ಮೇಲೆ ನೀನ್ ಅವಳ ಆಸೆ ಬಿಟ್ಟಿದ್ದೆ.. ಒಳ್ಳೆ ಸಮಯ ನೋಡಿ ನಿಂಗೆ ಪ್ರಪೋಸ್ ಮಾಡ್ದೆ.. ನೀ ಒಪ್ಕೊತ್ತೀಯಾ ಅಂತ ಗೊತ್ತಿತ್ತು…ನೀ ಒಪ್ಕೊಳ್ಳೆಬೇಕಿತ್ತು… ಯಾಕಂದ್ರೆ ನೀನು ನನ್ನವನು. “

Advertisements

4 thoughts on “CO-INCIDENCE!?”

comment :

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s